ಮರ್ಸಿಡಿಸ್ ಬೆಂಝ್ - ಟಿವಿಎಸ್ ಸುಂದರಂ ಮೋಟರ್ಸ್ 18ನೇ ವರ್ಷಕ್ಕೆ: ಗ್ರಾಹಕರಿಗೆ ಆಕರ್ಷಕ ಕೊಡುಗೆಗಳು
ಮಂಗಳೂರು, ಅ.23: ಪ್ರತಿಷ್ಠಿತ ಮರ್ಸಿಡಿಸ್ ಬೆಂಝ್ ಕಾರುಗಳ ಅಧಿಕೃತ ಮಾರಾಟಗಾರರಾಗಿ ದೇಶದ ಖ್ಯಾತ ಅಟೋಮೊಬೈಲ್ ಸಂಸ್ಥೆ ಟಿವಿಎಸ್ ಸುಂದರಂ ಮೋಟರ್ಸ್ ಯಶಸ್ವೀ 18ನೇ ವರ್ಷಕ್ಕೆ ಇತ್ತೀಚಿಗೆ ಕಾಲಿಟ್ಟಿದೆ. 2001ರಲ್ಲಿ ಪ್ರಾರಂಭವಾದ ಮರ್ಸಿಡಿಸ್ ಬೆಂಝ್ ಜೊತೆಗಿನ ಈ ಪಾಲುದಾರಿಕೆಯಲ್ಲಿ ಈಗ ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಒಟ್ಟು 9 ಬೃಹತ್ ಶೋರೂಮ್ ಹಾಗೂ ಸರ್ವಿಸ್ ಕೇಂದ್ರಗಳು ಕಾರ್ಯಾಚರಿಸುತ್ತಿವೆ.
ಈವರೆಗೆ ಒಟ್ಟು 8,300 ಮರ್ಸಿಡಿಸ್ ಬೆಂಝ್ ಕಾರುಗಳನ್ನು ಸುಂದರಂ ಮೋಟರ್ಸ್ ಮಾರಾಟ ಮಾಡಿದ್ದು 1,15,000 ಸೇವೆಗಳನ್ನು ಒದಗಿಸಿದ ದಾಖಲೆ ಮಾಡಿದೆ.
ಮರ್ಸಿಡಿಸ್ ಬೆಂಝ್ ಹಾಗು ಟಿವಿಎಸ್ ಸುಂದರಂ ಮೋಟರ್ಸ್ ಗಳು 18ನೇ ವರ್ಷಕ್ಕೆ ಕಾಲಿಟ್ಟಿರುವ ಈ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಕೊಡುಗೆಗಳು ಈಗಾಗಲೇ ಇರುವ ಗ್ರಾಹಕರು ಹಾಗು ಹೊಸ ಗ್ರಾಹಕರಿಗೂ ಸಿಗಲಿವೆ. ನೂತನ ಮರ್ಸಿಡಿಸ್ ಬೆಂಝ್ ಕಾರು ಖರೀದಿಸುವವರಿಗೆ ಕಡಿಮೆ ಇಎಂಐ (ಮಾಸಿಕ ಕಂತುಗಳು) ಹಾಗು ಕಡಿಮೆ ಆರ್ ಒ ಐ (ಬಡ್ಡಿ ದರ), ಸುಲಭ ಫೈನಾನ್ಸ್ ಆಯ್ಕೆಗಳು, ಖಚಿತ ಬೈ ಬ್ಯಾಕ್ ಆಯ್ಕೆಗಳು ಸೀಮಿತ ಅವಧಿಗೆ ಲಭ್ಯ ಇವೆ.
ಸುಂದರಂ ಮೋಟರ್ಸ್ ನ ಮಂಗಳೂರು ಮರ್ಸಿಡಿಸ್ ಬೆಂಝ್ ಮಾರಾಟ ನಂತರದ ಸೇವಾ ಕೇಂದ್ರ ಈಗ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡಿದೆ. ಅಲ್ಲಿ ಫುಲ್ ಬಾಡಿ ಪೇಂಟಿಂಗ್ ಸೌಲಭ್ಯವನ್ನೂ ಒದಗಿಸಲಾಗಿದೆ. ಈ ಮೂಲಕ ಈಗ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಮಂಗಳೂರಿನಲ್ಲೇ ನೀಡಲು ಸಾಧ್ಯವಾಗಿದೆ .
ಗ್ರಾಹಕರು ಸೇಲ್ಸ್ ಶೋರೂಮ್ - ಸಮಿಟ್ ಕಟ್ಟಡ, ಏರ್ಪೋರ್ಟ್ ರಸ್ತೆ, ಮೇರಿಹಿಲ್, ಮಂಗಳೂರು - 575008 ಇಲ್ಲಿಗೆ ಮತ್ತು ಸರ್ವಿಸ್ ಕೇಂದ್ರ - ಸರ್ವೇ ನಂಬ್ರ 23 – 1B, ಕಣ್ಣೂರು ಚೆಕ್ ಪೋಸ್ಟ್ ಬಳಿ, ರಾಹೆ 75, ಮಂಗಳೂರು ಇಲ್ಲಿಗೆ ಭೇಟಿ ನೀಡಿ ಮರ್ಸಿಡಿಸ್ ಬೆಂಝ್ ನೂತನ ಕಾರುಗಳು ಹಾಗು ಲಭ್ಯ ಸೇವೆಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ. +91- 9008442155 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.