ಅಕ್ರಮ ಸಾಗಾಟ: 16 ಜಾನುವಾರುಗಳ ರಕ್ಷಣೆ
ಬ್ರಹ್ಮಾವರ, ನ.1: ಬೊಲೆರೋ ಪಿಕಪ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 17 ಜಾನುವಾರುಗಳನ್ನು ಬ್ರಹ್ಮಾವರ ಪೊಲೀಸರು ನ.1ರಂದು ಬೆಳಗಿನ ಜಾವ ಕುದಿ ಗ್ರಾಮದ ಹಳ್ಳಿಉಬ್ಬು ಎಂಬಲ್ಲಿ ವಶಪಡಿಸಿ ಕೊಂಡಿದ್ದಾರೆ.
ವಾಹನದಲ್ಲಿದ್ದ ನಾಲ್ವರು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಅದರಲ್ಲಿದ್ದ 52 ಸಾವಿರ ರೂ. ಮೌಲ್ಯದ ಒಟ್ಟು 17 ಜಾನುವಾರುಗಳನ್ನು ಹಾಗೂ 3,00,000ರೂ. ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಒಂದು ಕರು ಮೃತಪಟ್ಟಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story