ಮೇ 13, 14ರಂದು ಇಂಗ್ಲೆಂಡ್ನ ಶಿಕ್ಷಣ ತಜ್ಞರ ಜತೆ ಉಚಿತ ಸಮಾಲೋಚನೆ
ಮಂಗಳೂರು, ಮೇ 11: ಎಸೆಸೆಲ್ಸಿ ಬಳಿಕ ಮುಂದೇನು? ಎಂಬ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಇಂಗ್ಲೆಂಡ್ನ ಶಿಕ್ಷಣ ತಜ್ಞ ಮನಶಾಸ್ತ್ರಜ್ಞರ ಜತೆ ಉಚಿತ ಸಮಾಲೋಚನಾ ಮಾತುಕತೆಯನ್ನು ಮೇ 13 ಮತ್ತು 14ರಂದು ಆಯೋಜಿಸಲಾಗಿದೆ. ದೇರಳಕಟ್ಟೆ ನಾಟೆಕಲ್ನ ಕುನಿಲ್ ಕಾನ್ಫರೆನ್ಸ್ ಹಾಲ್ನಲ್ಲಿ ಮೇ 13ರಂದು ಸಂಜೆ 3:30 ಹಾಗೂ ಮೇ 14ರಂದು ಮಧ್ಯಾಹ್ನ 2:30ಕ್ಕೆ ಈ ಸಮಾಲೋಚನಾ ಮಾತುಕತೆ ನಡೆಯಲಿದೆ. ಆಸಕ್ತರು 0824- 2203444/9474558645 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story