ವಳಚ್ಚಿಲ್: ಹೈಮಾಸ್ಟ್ ಲೈಟ್ ಉದ್ಘಾಟನೆ
ಮಂಗಳೂರು, ನ.10: ಅರ್ಕುಳ ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ಸದಸ್ಯರ ಅನುದಾನದಲ್ಲಿ ಮಂಜೂರಾದ ಹೈಮಾಸ್ಟ್ ಲೈಟ್ ನ್ನು ವಳಚ್ಚಿಲ್ ಕೇಂದ್ರ ಜುಮಾ ಮಸೀದಿ ಬಳಿ ಮತ್ತು ವಳಚ್ಚಿಲ್ ಆತಲೆ ಎಂಬಲ್ಲಿ ಅಳವಡಿಸಲಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಶನಿವಾರ ರಾತ್ರಿ ನಡೆಯಿತು.
ಎಸ್ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಹೈಮಾಸ್ಟ್ ಲೈಟ್ ಉರಿಸಿ ಉದ್ಘಾಟನೆ ಮಾಡಿದರು.
ಈ ಸಂದರ್ಭ ಮಸೀದಿಯ ಅಧ್ಯಕ್ಷ ಹಮೀದ್ ಹಾಜಿ, ಉಪಾಧ್ಯಕ್ಷ ಎಂ.ಆರ್.ಕುಂಞಿಮೋನು, ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯ ಯಾಸೀನ್ ಅರ್ಕುಳ, ಶಮೀರ್, ಝೊಹರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಸಲೀಂ ಕುಂಪನಮಜಲು, ಅರ್ಕುಳ ಏರಿಯಾ ಅಧ್ಯಕ್ಷ ನಝೀರ್, ರಶೀದ್ ಅರ್ಕುಳ, ವಿ.ಎಚ್. ಫಲುಳು, ಅಬ್ದುಲ್ ಖಾದರ್ ಪುತ್ತು ಭಾವ, ಖಾಸಿಂ ಆತಲೆ ಮತ್ತಿತರರು ಉಪಸ್ಥಿತರಿದ್ದರು.
Next Story