ವಿಟ್ಲದಲ್ಲಿ ಮೀಲಾದುನ್ನಬಿ ಆಚರಣೆ
ವಿಟ್ಲ, ನ.10: ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಪ್ರವಾದಿ ಮುಹಮ್ಮದ್ (ಸ.)ರವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷ ಇಬ್ರಾಹೀಂ ಮೇಗಿನಪೇಟೆ ಧ್ವಜಾರೋಹಣಗೈದರು. ಈ ಸಂದರ್ಭ ಮದ್ರಸ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು. ಮೌಲೂದ್ ಪಾರಾಯಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಮಸೀದಿ ಖತೀಬ್ ಮುಹಮ್ಮದ್ ಅಲಿ ಫೈಝಿ, ಕಾರ್ಯದರ್ಶಿ ಇಬ್ರಾಹೀಂ ಕೊಲ್ನಾಡು, ಜತೆ ಕಾರ್ಯದರ್ಶಿ ಇಕ್ಬಾಲ್ ಶೀತಲ್, ಅಬೂಬಕರ್ ಅನಿಲಕಟ್ಟೆ, ಸದರ್ ಉಮರ್ ಸಅದಿ, ನೋಟರಿ ಅಬೂಬಕರ್, ಮುಹಮ್ಮದ್ ಇಕ್ಬಾಲ್ ಹಾನೆಸ್ಟ್, ಹನೀಫ್ ದಾರಿಮಿ, ಇಸ್ಮಾಯೀಲ್ ಪರ್ತಿಪ್ಪಾಡಿ, ಇಕ್ಬಾಲ್ ಮೇಗಿನಪೇಟೆ, ನಾಸಿರ್ ಕುರುಂಬಳ, ಯೂಸೂಫ್ ಗಮಿ, ರಫೀಕ್ ಪೊನ್ನೋಟು, ನಾಸಿರ್ ಹಳೆಮನೆ, ಸಿದ್ದೀಕ್ ಮಾಲಮೂಲೆ, ಅಂದುಞಿ ಗಮಿ, ವಿ.ಎ.ರಶೀದ್ ಮುಂತಾದವರು ಉಪಸ್ಥಿತರಿದ್ದರು.
Next Story