ಟೀಮ್ ಚಕ್ರವರ್ತಿ ಕರ್ವೆಲ್ ವತಿಯಿಂದ ಮೀಲಾದ್ ಕಿಟ್ ವಿತರಣೆ
ಮಂಗಳೂರು: ಅರ್ಹ ಬಡ ಕುಟುಂಬಗಳಿಗೆ ಟೀಮ್ ಚಕ್ರವರ್ತಿ ಕರ್ವೆಲ್ ವತಿಯಿಂದ ಮೀಲಾದ್ ಕಿಟ್ ವಿತರಿಸಲಾಯಿತು.
ಈ ಸಂದರ್ಭ 10 ಬಡ ಕುಟುಂಬದ ಮನೆಗೆ ಭೇಟಿ ನೀಡಿ ಮೀಲಾದ್ ಕಿಟ್ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಕರ್ವೆಲ್ ಪರಿಸರದ ಬೀಟ್ ಪೊಲೀಸರಾದ ಬಾಲಕೃಷ್ಣ ಚಾಲನೆ ನೀಡಿದರು. ಈ ಸಂದರ್ಭ ಟೀಮ್ ಚಕ್ರವರ್ತಿ ಪದಾಧಿಕಾರಿಗಳು ಹಾಗೂ ಚಕ್ರವರ್ತಿ ಸದಸ್ಯರು ಪಾಲ್ಗೊಂಡಿದ್ದರು.