ನ.11ರಂದು ವಿಟ್ಲದಲ್ಲಿ ವಿದ್ಯುತ್ ವ್ಯತ್ಯಯ
ವಿಟ್ಲ, ನ. 10: ವಿಟ್ಲ ಭಾಗದ ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ನ.11 ರಂದು ನಿರ್ವಹಣೆ ಕಾಮಗಾರಿ ನಡೆಸಲಿರುವುದರಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಕಾವೂರು ಕೆಪಿಸಿಟಿಎಲ್ನ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಟ್ಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್ಗಳ ವಿದ್ಯುತ್ ವ್ಯತ್ಯಯವಾಗುವುದರಿಂದ ಈ ಭಾಗದ ವಿದ್ಯುತ್ ಬಳಕೆದಾರರು ಇಲಾಖೆಯೊಂದಿಗೆ ಸಹಕರಿಸುವಂತೆ ಪ್ರಕಟನೆಯಲ್ಲಿ ಕೋರಲಾಗಿದೆ.
Next Story