ಕುಂದಾಪುರ: ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯ ವಶ
ಕುಂದಾಪುರ, ನ.11: ನಿಷೇಧದ ಮಧ್ಯೆ ಕೋಣಿ ಪಂಚಾಯತ್ ಎದುರಿನ ಪೂರ್ಣಿಮಾ ಬಾರ್ನಲ್ಲಿ ನ.10ರಂದು ಮಧ್ಯಾಹ್ನ ವೇಳೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅವಿನಾಶ ಶೆಟ್ಟಿ, ಪ್ರತಾಪ್ ಶೆಟ್ಟಿ, ಸಂತೋಷ ಶೆಟ್ಟಿ ಎಂಬವರು ಮದ್ಯ ಮಾರಾಟ ಮಾಡುತ್ತಿದ್ದು, ಇವರಿಂದ 16,753ರೂ. ಮೌಲ್ಯದ ಒಟ್ಟು 35 ಲೀಟರ್ 480 ಎಂ.ಎಲ್. ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸಮಕ್ಕಿಯಿಂದ ಮೊಳಹಳ್ಳಿಗೆ ಹೋಗುವ ರಸ್ತೆಯ ಹಾಡಿಯ ಬಳಿ ನ.10ರಂದು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ದಾಳಿ ವೇಳೆ ಆರೋಪಿಗಳಾದ ಉದಯ ಕೊಠಾರಿ ಮತ್ತು ರಾಜು ಪರಾರಿಯಾಗಿದ್ದಾರೆ. ಇವರು ಕೃತ್ಯಕ್ಕೆ ಬಳಿಸಿದ ಬೈಕ್ ಹಾಗೂ 881.10ರೂ. ಮೌಲ್ಯದ 3.06 ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story