ವಿಟ್ಲ: ಹೊರೈಝನ್ ಶಾಲೆಯಲ್ಲಿ ಮೌಲಾನಾ ಅಬುಲ್ ಕಲಾಂ ಆಝಾದ್ ಜನ್ಮದಿನಾಚರಣೆ
ವಿಟ್ಲ, ನ.12: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೇಶದ ಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಝಾದ್ ರವರ ಜನ್ಮ ದಿನವನ್ನು ಆಚರಿಸಲಾಯಿತು.
ಶಾಲೆಯ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಹಾನೆಸ್ಟ್ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ನೋಟರಿ ಅಬೂಬಕರ್ ಮಾತನಾಡಿ ಕಲಾಂ ಆಝಾದ್ ರವರ ಸ್ವಾತಂತ್ರ್ಯ ಹೋರಾಟ ಹಾಗೂ ಜೀವನದ ಬಗ್ಗೆ ವಿವರಿಸಿದರು.
ಮಸೀದಿಯ ಅಧ್ಯಕ್ಷ ಇಬ್ರಾಹೀಂ ಮೇಗಿನಪೇಟೆ, ಖತೀಬ್ ಮುಹಮ್ಮದ್ ಅಲಿ ಇರ್ಫಾನಿ ಫೈಝಿ, ಮುಖ್ಯ ಶಿಕ್ಷಕಿ ವಿಲಾಸಿನಿ, ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಮೇಲ್ವಿಚಾರಕ ವಿ.ಕೆ.ಎಂ.ಅಶ್ರಫ್, ಟ್ರಸ್ಟಿಗಳಾದ ಸಿದ್ದೀಕ್ ಮಾಲಮೂಲೆ, ಇಕ್ಬಾಲ್ ಹಳೆಮನೆ, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಶಾಲಾ ಸದರ್ ಉಮರ್ ಸಅದಿ, ಮದ್ರಸದ ಸದರ್ ಹನೀಫ್ ದಾರಿಮಿ ಈ ಸಂದರ್ಭ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೀಲಾದುನ್ನಬಿ ದಿನಾಚರಣೆಯಂದು ಕರ್ತವ್ಯ ನಿರ್ವಹಿಸಿದ ಮದ್ರಸ ಅಧ್ಯಾಪಕರನ್ನು ಮತ್ತು ಸೆಕ್ಯೂರಿಟಿ ಮುಹಮ್ಮದ್ ಪಾರೆ(ಮೋನು)ರವರನ್ನು ಅಭಿನಂದಿಸಲಾಯಿತು