ಉಪ್ಪಿನಂಗಡಿ: ಶಿಕ್ಷಕಿಯ ಅತ್ಯಾಚಾರ ಆರೋಪ; ಮುಖ್ಯೋಪಾಧ್ಯಾಯನಿಗೆ ನ್ಯಾಯಾಂಗ ಬಂಧನ
ಉಪ್ಪಿನಂಗಡಿ: ಶಾಲಾ ಅತಿಥಿ ಶಿಕ್ಷಕಿಯಾಗಿದ್ದ 28ರ ಹರೆಯದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಪದ್ಮುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ್ (41) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ್ ಎಂಬವರು ತನ್ನ ಶಿಕ್ಷಕಿ ಕೆಲಸವನ್ನು ಖಾಯಂಗೊಳಿಸುವ ಆಸೆಯೊಡ್ಡಿ ತನ್ನ ಮೇಲೆ ಕಳೆದ ಎಪ್ರಿಲ್ 14ರಂದು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ, ಆ ಸಂದರ್ಭದಲ್ಲಿ ಅಲ್ಲಿ ಅತಿಥಿ ಶಿಕ್ಷಕಿಯಾಗಿದ್ದ ಯುವತಿಯೋರ್ವರು ನ. 10ರಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಘಟನೆಯಿಂದ ಮಾನಸಿಕವಾಗಿ ನೊಂದ ನಾನು ಬೆದರಿ ತಕ್ಷಣಕ್ಕೆ ನಾನು ಪೊಲೀಸರಿಗೆ ದೂರು ನೀಡಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿ ಮಂಜುನಾಥ್ನನ್ನು ಮಂಗಳವಾರ ಉಪ್ಪಿನಂಗಡಿಯಲ್ಲಿ ಬಂಧಿಸಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.