ಕೋಳಿ ಅಂಕಕ್ಕೆ ದಾಳಿ: ಸೊತ್ತು ವಶ
ಕಾರ್ಕಳ, ನ.12: ಕುಕ್ಕುಂದೂರು ಗ್ರಾಮದ ನಕ್ರೆ ಇಟ್ಟಿಕಟ್ಟ ಎಂಬಲ್ಲಿ ನ.11ರಂದು ಸಂಜೆ ವೇಳೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಕೋಳಿ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಕೋಳಿ ಅಂಕ ನಡೆಸುತ್ತಿದ್ದ ವ್ಯಕ್ತಿಗಳು ಓಡಿ ಪರಾರಿಯಾಗಿದ್ದು, ಸ್ಥಳದಲ್ಲಿದ್ದ ನಾಲ್ಕು ಕೋಳಿಗಳನ್ನು, ಎರಡು ಬಾಳ್, ಐದು ಬೈಕ್, ಒಂದು ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story