ಮಂಗಳೂರು : ಗುಡ್ಡ ಕುಸಿದು ಓರ್ವ ಮೃತ್ಯು, ಮೂರು ಮಂದಿಗೆ ಗಾಯ
ಮಂಗಳೂರು : ನಗರದ ಹಾಸ್ಟೆಲ್ ಒಂದರ ಸಮೀಪ ಗುಡ್ಡ ಕುಸಿದ ಪರಿಣಾಮ ಗಂಭೀರ ಗಾಯಗೊಂಡ ಕಾರ್ಮಿಕನೋರ್ವ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಮೃತರನ್ನು ಮೂಡುಶೆಡ್ಡೆ ನಿವಾಸಿ ಶ್ಯಾಮ್ ಎಂದು ಗುರುತಿಸಲಾಗಿದೆ.
ಮಂಗಳೂರಿನ ಕುಡುಪು ಬಳಿ ಇರುವ ಹಾಸ್ಟೆಲ್ ಒಂದರ ಸಮೀಪ ಗುಡ್ಡ ಕುಸಿದ ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬಂದಿದೆ.
Next Story