ನ.15 ರಂದು ಮಸ್ಜಿದು ತಖ್ವಾದಲ್ಲಿ ಮೌಲಿದ್ ಪಾರಾಯಣ
ಮಂಗಳೂರು : ಇಸ್ಲಾಮಿಕ್ ಕಲ್ಚರಲ್ ಸೆಂಟರ್, ಪಂಪ್ ವೆಲ್ ಇದರ ಅಧೀನದಲ್ಲಿರುವ 'ಮಸ್ಜಿದು ತಖ್ವಾ'ದಲ್ಲಿ ಪ್ರವಾದಿ ಮುಹಮ್ಮದ್ (ಸ)ರವರ 1494ನೇ ಜನ್ಮದಿನಾಚರಣೆ ಪ್ರಯುಕ್ತ ನ.15ರಂದು ಸಂಜೆ 6.30ಕ್ಕೆ ಬೃಹತ್ ಮೌಲಿದ್ ಪಾರಾಯಣ ಮಜ್ಲಿಸ್ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶೈಖುನಾ ತಾಜುಲ್ ಫುಖಹಾಅ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ಲ ಕುಂಞಿ ಯೇನೆಪೋಯ ಹಾಗೂ ಇನ್ನಿತರ ಉಲಮಾಗಳು ಹಾಗೂ ಧಾರ್ಮಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪಂಪ್ವೆಲ್ ಇದರ ಮುತವಲ್ಲಿ ಎಸ್.ಎಂ. ರಶೀದ್ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Next Story