ಮಂಗಳೂರು ಮನಪಾ ಚುನಾವಣೆ: ಮುಂದುವರಿದ ಬಿಜೆಪಿಯ ಗೆಲುವಿನ ಓಟ
ಮಾಜಿ ಮೇಯರ್ ಭಾಸ್ಕರ್ ಕೆ ಗೆಲುವು, ಪ್ರತಿಭಾ ಕುಳಾಯಿಗೆ ಸೋಲು
ಮಂಗಳೂರು, ನ.14: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಬಿಜೆಪಿ ಗೆಲುವಿನ ಓಟ ಮುಂದುವರಿಸಿದೆ.
ವಾರ್ಡ್ ನಂ.7 ಇಡ್ಯಾ ಪಶ್ಚಿಮ: ಬಿಜೆಪಿಯ ನಯನಾ ಆರ್. ಕೋಟ್ಯಾನ್ ರಿಗೆ ಗೆಲುವು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಕುಳಾಯಿ ಸೋಲುಂಡಿದ್ದಾರೆ.
ವಾರ್ಡ್ 36 ಪದವು ಪೂರ್ವ: 2492 ಮತಗಳನ್ನು ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮೇಯರ್ ಭಾಸ್ಕರ್ ಕೆ. ಅವರಿಗೆ ಗೆಲುವು
ನಂ.6 ಇಡ್ಯಾ ಪೂರ್ವ ವಾರ್ಡ್: 2229 ಮತಗಳನ್ನು ಗಳಿಸಿರುವ ಬಿಜೆಪಿಯ ಸರಿತಾ ಶಶಿಧರ್ ಗೆ ಜಯ
ವಾರ್ಡ್ 2 ಸುರತ್ಕಲ್ ಪೂರ್ವ: 2496 ಮತಗಳನ್ನು ಗಳಿಸಿರುವ ಬಿಜೆಪಿಯ ಶ್ವೇತಾರಿಗೆ ಗೆಲುವು
ವಾರ್ಡ್ 42 ಡೊಂಗರಕೇರಿ: 2140 ಮತಗಳನ್ನು ಗಳಿಸಿರುವ ಬಿಜೆಪಿಯ ಜಯಶ್ರೀ ಕುಡ್ವರಿಗೆ ಗೆಲುವು
ವಾರ್ಡ್ 16 ಬಂಗ್ರ ಕೂಳೂರು: 2308 ಮತಗಳನ್ನು ಗಳಿಸಿರುವ ಬಿಜೆಪಿಯ ಕಿರಣ್ ಕುಮಾರ್ ಜಯಿಸಿದ್ದಾರೆ.
ವಾರ್ಡ್ 52 ಕಣ್ಣೂರು: ಬಿಜೆಪಿಯ ಚಂದ್ರಾವತಿಗೆ ಗೆಲುವು
ವಾರ್ಡ್ 31 ಬಿಜೈ: 1939 ಮತಗಳನ್ನು ಗಳಿಸಿರುವ ಕಾಂಗ್ರೆಸ್ ಲ್ಯಾನ್ಸಿ ಲಾಟ್ ಪಿಂಟೋ 7ನೆ ಬಾರಿ ಗೆಲುವು ಸಾಧಿಸಿದ್ದಾರೆ.
ವಾರ್ಡ್ 33 ಕದ್ರಿ ದಕ್ಷಿಣ: ಕಾಂಗ್ರೆಸ್ ಡಿ.ಕೆ.ಅಶೋಕ್ ಕುಮಾರ್ ರಿಗೆ ಗೆಲುವು
ವಾರ್ಡ್ 12 ಪಂಜಿಮೊಗರು: ಕಾಂಗ್ರೆಸ್ ಅನಿಲ್ ಕುಮಾರ್ ಗೆಲುವು ಸಾಧಿಸಿದ್ದಾರೆ.