ಲ್ಯಾಂಡ್ಟ್ರೇಡ್ಸ್ ‘ಸಾಲಿಟೇರ್’ ಯೋಜನೆ : ಕ್ರಿಸಿಲ್ 7 ಸ್ಟಾರ್ಸ್ ಮಾನ್ಯತೆಯ ಪುರಸ್ಕಾರ
ಮಂಗಳೂರು : ನಗರದ ಪ್ರಸಿದ್ಧ ಲ್ಯಾಂಡ್ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯ ನೂತನವಾಗಿ ಪೂರ್ಣಗೊಂಡ ‘ಸಾಲಿಟೇರ್’ ಪ್ರತಿಷ್ಠಿತ ವಸತಿ ಸಮುಚ್ಚಯ ಯೋಜನೆಗೆ ಕ್ರಿಸಿಲ್ನ ಸರ್ವಶ್ರೇಷ್ಠ ರಿಯಲ್ ಎಸ್ಟೇಟ್ ಯೋಜನೆ ಗ್ರೇಡಿಂಗ್ ‘7 ಸ್ಟಾರ್ಸ್’ ಲಭಿಸಿದೆ.
ಕ್ರಿಸಿಲ್ನ ಮಾನ್ಯತೆಯಂತೆ 7 ಸ್ಟಾರ್ಸ್ ಗ್ರೇಡ್ ಅಂದರೆ ಸೂಚಿತ ಅವಧಿಯೊಳಗೆ, ಘೋಷಿತ ವಿವರಗಳಂತೆ ಗರಿಷ್ಠ ಸಾಮರ್ಥ್ಯ ಸಹಿತ ಯೋಜನೆಯ ನಿರ್ಮಾಣ ಮತ್ತು ಗ್ರಾಹಕರಿಗೆ ಹಸ್ತಾಂತರ. ಗ್ರಾಹಕರಿಗೆ ಶ್ರೇಷ್ಠ ಸೌಲಭ್ಯಗಳ ಸಹಿತ ಯೋಜನೆಗಳನ್ನು ಒದಗಿಸುವ ಲ್ಯಾಂಡ್ ಟ್ರೇಡ್ಸ್ನ ಪರಂಪರೆಯಲ್ಲಿದು ಇನ್ನೊಂದು ಮಹತ್ವಪೂರ್ಣ ಸಾಧನೆ ಎಂದು ಲ್ಯಾಂಡ್ಟ್ರೇಡ್ಸ್ನ ಮಾಲಕ ಕೆ. ಶ್ರೀನಾಥ್ ಹೆಬ್ಬಾರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ಲ್ಯಾಂಡ್ಟ್ರೇಡ್ಸ್ ಸಂಸ್ಥೆಯು ಕ್ರಿಸಿಲ್ನ ಸ್ವತಂತ್ರ ಮಾನ್ಯತಾ ಪ್ರಕ್ರಿಯೆಯನ್ನು ಅಳವಡಿಸಿದ ಮಂಗಳೂರಿನ ಪ್ರಪ್ರಥಮ ರಿಯಲ್ ಎಸ್ಟೇಟ್ ಉದ್ಯಮ ಸಂಸ್ಥೆ ಮತ್ತು ಈ ಮಾನ್ಯತೆ ಪಡೆದ ಸಂಸ್ಥೆಯ 6ನೇ ಯೋಜನೆ ಸಾಲಿಟೇರ್ ಆಗಿದೆ. ಇನ್ಸೈನಿಯಾ, ಸಾಯಿ ಗ್ರಾಂಡ್ಯೂರ್, ಔರೇನಿಯಾಗಳಿಗೆ 7 ಸ್ಟಾರ್ಸ್, ವೌರಿಶ್ಕಾ ಪ್ಯಾಲೇಸ್, ಅಟ್ಲಾಂಟಿಸ್ಗೆ 6 ಸ್ಟಾರ್ಸ್ ಲಭಿಸಿದೆ.
ಕ್ರಿಸಿಲ್ನ ಸ್ಟಾರ್ ಗ್ರೇಡಿಂಗ್ (ಕ್ರೆಸ್ಟ್) ಎಂಟು ಅಂಶಗಳ ಸಹಿತ ಶ್ರೇಷ್ಠ ಗುಣಮಟ್ಟದ ಸ್ವತಂತ್ರ ಸಮೀಕ್ಷಾ ಅಧ್ಯಯನ ಹೊಂದಿರುತ್ತದೆ. 7 ಸ್ಟಾರ್ಸ್ ಗರಿಷ್ಠ ಪುರಸ್ಕಾರವಾಗಿದೆ. ಕ್ರೆಸ್ಟ್-ಕಾನೂನು ದಾಖಲೆ ಪತ್ರಗಳು, ನಿರ್ಮಾಣ ಕಾರ್ಯ, ಆರ್ಥಿಕ ಸಾಧ್ಯತೆ, ಯೋಜನಾ ಹಿನ್ನೆಲೆ, ಸಂಸ್ಥೆಯ ಪ್ರವರ್ತಕರ ಸಾಧನಾ ದಾಖಲೆಯ ಸಮೀಕ್ಷೆ ನಡೆಯುತ್ತದೆ.
ಅತ್ಯಾಧುನಿಕ ಶೈಲಿಕ ನಗರದ ಹೆಮ್ಮೆಯ ಹ್ಯಾಟ್ಹಿಲ್ ಸಮೀಪ ನಿರ್ಮಾಣಗೊಂಡ 32 ಅಂತಸ್ತುಗಳ ವಾಸ್ತುವೈಭವ ಶೈಲಿಯ ಸಾಲಿಟೇರ್ ವಸತಿ ಸಮುಚ್ಚಯವು ಕ್ಲಬ್ಹೌಸ್, ಈಜುಕೊಳ, ಜಕೂಝಿ, ಸೌನಾ- ಸ್ಟೀಮ್ ರೂಂ, ಜಿಮ್, ಒಳಾಂಗಣ ಕ್ರೀಡಾಂಗಣ ಸಹಿತ ಸರ್ವಸಜ್ಜಿತವಾಗಿದೆ. ಅರಬೀ ಸಮುದ್ರದ ವಿಹಂಗಮ ನೋಟ ವಿಶೇಷ ಆಕರ್ಷಣೆ. 2-3-4 ಬಿಎಚ್ಕೆ, 5 ಬಿಎಚ್ಕೆ ಡುಪ್ಲೆಕ್ಸ್ ಸಹಿತ ಪರಿಸರ ಸ್ನೇಹಿ 145 ಅಪಾರ್ಟ್ಮೆಂಟ್ಗಳಿವೆ. ಮಳೆನೀರು ಕೊಯ್ಲು, ಕೇಂದ್ರೀಕೃತ ತ್ಯಾಜ್ಯ ಸಂಸ್ಕಾರಣೆ, ಸೌರ ವಿದ್ಯುತ್ ಉತ್ಪಾದನೆಯ ವಿಶೇಷಗಳಿವೆ.
ಸಾಲಿಟೇರ್ನ ಭೂಮಿಪೂಜೆಯು 2014ರ ಸೆ. 29ರಂದು ನಡೆದಿತ್ತು. ಎಂಫೇರ್ ಕನ್ಸ್ಟ್ರಕ್ಷನ್ ನಿರ್ಮಾಣ, ಆರ್ಕಿಟೆಕ್ನಿಕ್ಸ್ನ ಪೀಟರ್ ಮಸ್ಕರೇನಸ್ ಆರ್ಕಿಟೆಕ್ಟ್ ನಿಗದಿತ ಅವಧಿಯಲ್ಲಿ ಲ್ಯಾಂಡ್ಟ್ರೇಡ್ಸ್ ನಿರ್ಮಿಸಿದೆ.
ಕ್ರಿಸಲ್ನ ಡಿಎ2 ರಿಯಲ್ ಎಸ್ಟೇಟ್ ಡೆವಲಪರ್ಸ್ ಮಾನ್ಯತೆ ಪಡೆದ ನಗರದ ಏಕೈಕ ಸಂಸ್ಥೆ ಲ್ಯಾಂಡ್ಟ್ರೇಡ್ಸ್. ಸಕಾಲಿಕ ನಿರ್ಮಾಣ, ಶ್ರೇಷ್ಠ ಗುಣಮಟ್ಟ, ಪರಿಪೂರ್ಣ ದಾಖಲೆ ಸಹಿತ ಗ್ರಾಹಕರಿಗೆ ಹಸ್ತಾಂತರ ಸಂಸ್ಥೆಯ ಸಾಮರ್ಥ್ಯಕ್ಕೆ ಈ ಮಾನ್ಯತೆ ನೀಡಲಾಗಿದೆ. ಲ್ಯಾಂಡ್ಟ್ರೇಡ್ಸ್ನ ಸುಭದ್ರ ಮಾರುಕಟ್ಟೆ, ಅಭಿವೃದ್ಧಿ ಶೈಲಿ, ಪರಿಪೂರ್ಣ ಆರ್ಥಿಕ ನಿರ್ವಹಣೆಯನ್ನು ಸೂಚಿಸುತ್ತದೆ. ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಪರಿಪೂರ್ಣ ಶೈಲಿ, ಸಕಾಲಿಕ ನಿರ್ಮಾಣದ ಮೂಲಕ ಮಾರುಕಟ್ಟೆಯಲ್ಲಿ ವಿಶ್ವಾಸ ತುಂಬುವಲ್ಲಿ ಲ್ಯಾಂಡ್ಟ್ರೇಡ್ಸ್ ಯಶಸ್ವಿಯಾಗಿದೆ.
ಕ್ರಿಸಿಲ್ ಸಂಸ್ಥೆಯು ಜಗತ್ತಿನ ಪ್ರಸಿದ್ಧ ಮತ್ತು ದೇಶದ ಅಗ್ರಗಣ್ಯ ಮಾನ್ಯತಾ ನೀಡಿಕೆಯ ಸಂಸ್ಥೆಯಾಗಿದೆ. 65 ನಗರಗಳ 270 ಡೆವಲಪರ್ಸ್ ಸಮೂಹದ 500 ಯೋಜನೆಗಳಲ್ಲಿ ಕ್ರಿಸಿಲ್ ಭಾಗಿಯಾಗಿದೆ. ದೇರೆಬೈಲ್ ಸಮೀಪ 154 ಫ್ಲ್ಯಾಟ್ಗಳ ಹ್ಯಾಬಿಟಟ್ ವನ್ 54, ಬಲ್ಮಠದಲ್ಲಿ ವಿಶೇಷವಾದ ಮೈಲ್ಸ್ಟೋನ್ 25 ವಾಣಿಜ್ಯ ಸಂಕೀರ್ಣ, ಸುರತ್ಕಲ್ ಬಳಿ ಎಮೆರಾಲ್ಡ್ ಬೇ ಬೀಚ್ ಬಳಿಯ ಪ್ರಾಪರ್ಟಿ ಪೂರ್ಣಗೊಳ್ಳುತ್ತಿದೆ. ಗಾಂಧಿನಗರದಲ್ಲಿ ನಕ್ಷತ್ರ ವಸತಿ ಸಮುಚ್ಚಯ, ಕಾರ್ಸ್ಟ್ರೀಟ್ನಲ್ಲಿ ಅನಂತೇಶ ವಾಣಿಜ್ಯ ಸಂಕೀರ್ಣ ಹೊಸ ಯೋಜನೆಗಳು.
ವಿಶ್ವಾಸದ ಮಾನ್ಯತೆ
ಗ್ರಾಹಕರ ಗರಿಷ್ಠ ಸಂತೃಪ್ತಿಯ ಸಲುವಾಗಿ ಶ್ರೇಷ್ಠ ಗುಣಮಟ್ಟದ, ಸಕಾಲಿಕ ನಿರ್ಮಾಣ ನಮ್ಮ ಈ 27 ವರ್ಷಗಳ ಪರಂಪರೆ. ಈಗ ಸಾಲಿಟೇರ್ಗೆ 7 ಸ್ಟಾರ್ಸ್ ಮಾನ್ಯತೆಯು ನಮಗೆ ಮತ್ತಷ್ಟು ವಿಶ್ವಾಸ ನೀಡಿದೆ. ಮತ್ತಷ್ಟು ಶ್ರೇಷ್ಠ ಸಾಧನೆಗೆ ಸ್ಫೂರ್ತಿಯಾಗಿದೆ.
- ಕೆ. ಶ್ರೀನಾಥ್ ಹೆಬ್ಬಾರ್.