ರೆಡ್ಕ್ರಾಸ್ ದ.ಕ. ಘಟಕ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆ
ಮಂಗಳೂರು, ನ.14: ಭಾರತೀಯ ರೆಡ್ಕ್ರಾಸ್ನ ದ.ಕ. ಜಿಲ್ಲಾ ಘಟಕವು ರಾಜ್ಯದ ಅತ್ಯುತ್ತಮ ಕಾರ್ಯನಿರ್ವಹಕ ಘಟಕ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರಶಸ್ತಿಯನ್ನು ರಾಜ್ಯಪಾಲರು ನ.28ರಂದು ಬೆಂಗಳೂರಿನ ರಾಜಭವನದಲ್ಲಿ ನಡೆಯುವ ವಾರ್ಷಿಕ ಮಹಾಸಭೆಯಲ್ಲಿ ಪ್ರಧಾನ ಮಾಡಲಿದ್ದಾರೆ ಎಂದು ಭಾರತೀಯ ರೆಡ್ ಕ್ರಾಸ್ನ ರಾಜ್ಯ ಸಮಿತಿಯ ಸದಸ್ಯ ಯತೀಶ್ ಬೈಕಂಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story