ತಲಪಾಡಿ ನದಿ ಕಿನಾರೆಯಲ್ಲಿ ಅಪರಿಚಿತ ಮೃತದೇಹ ಪತ್ತೆ
ಬಂಟ್ವಾಳ, ನ.17: ಬಂಟ್ವಾಳ ತಾಲೂಕಿನ ತಲಪಾಡಿ ಸಮೀಪದ ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹವೊಂದು ರವಿವಾರ ಪತ್ತೆಯಾಗಿದೆ.
ಅಪರಿಚಿತ ಗಂಡಸಿನ ಮೃತದೇಹಕ್ಕೆ ಸುಮಾರು 35 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ.
ತುಂಬೆ ಡ್ಯಾಂ ಸಮೀಪದ ತಲಪಾಡಿಯ ನೇತ್ರಾವತಿ ನದಿಯಲ್ಲಿ ಕಾರ್ಯಾಚರಿಸುತ್ತಿರುವ ಮರಳು ಡ್ರೆಜ್ಜಿಂಗ್ ಯಂತ್ರದಲ್ಲಿ ಮೃತದೇಹ ಪತ್ತೆಯಾಗಿದೆ. ಇಲ್ಲಿನ ಕೆಲಸಗಾರರು ಇಂದು ಬೆಳಗ್ಗೆ ಮರಳು ಡ್ರೆಜ್ಜಿಂಗ್ ಕಾರ್ಯದಲ್ಲಿ ತೊಡಗಿರುವಾಗ ಮಿಷನ್ ಸಮೀಪ ಮೃತದೇಹ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳೀಯರಾದ ಈಜುಗಾರರಾದ ಶಾಹುಲ್ ಹಮೀದ್, ರಿಯಾಝ್ ನೌಫಲ್, ನವಾಝ್, ಪುತ್ತುಮೋನು, ಲತೀಫ್ ಬಿ.ಸಿ., ಕಮರುದ್ದೀನ್, ಮುಹಮ್ಮದ್ ಅಲಿ, ಪೊಲೀಸ್ ಸಿಬ್ಬಂದಿ ಕೇದರ್ ಮೇತದೇಹವನ್ನು ಮೇಲೆತ್ತಲು ಸಹಕರಿಸಿದರು.
ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕಾಗಿದೆ.
Next Story