ಕರಾವಳಿ ವೆಲ್ಫೇರ್ ಅಸೋಸಿಯೇಷನ್ ರಿಯಾದ್ : ಅಧ್ಯಕ್ಷರಾಗಿ ನಝೀರ್ ಅಹ್ಮದ್ ಅವಿರೋಧ ಆಯ್ಕೆ
ರಿಯಾದ್ : ಇತ್ತೀಚಿಗೆ ಇಲ್ಲಿಯ ಮಸಲಾ ರೆನ್ ಆಡಿಟೋರಿಯಮ್ನಲ್ಲಿ ನಡೆದ ಲಾಭರಹಿತ ದತ್ತಿಸಂಸ್ಥೆ ಕರಾವಳಿ ವೆಲ್ಫೇರ್ ಅಸೋಸಿಯೇಷನ್ ರಿಯಾದ್ನ 12ನೇ ವಾರ್ಷಿಕ ಮಹಾಸಭೆಯಲ್ಲಿ ನಝೀರ್ ಅಹ್ಮದ್ ಅವರು 2019-20ನೇ ಸಾಲಿಗೆ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ನೆಲ್ಸನ್ ಡಿಸೋಜಾ,ಪ್ರಧಾನ ಕಾರ್ಯದರ್ಶಿಯಾಗಿ ಇರ್ಫಾನ್ ಅಬೂಬಕರ್, ಜಂಟಿ ಕಾರ್ಯದರ್ಶಿಯಾಗಿ ಸಲ್ಮಾನ್ ನೂರ್, ಕೋಶಾಧಿಕಾರಿಯಾಗಿ ಮಹೇಶ ಹೆಗ್ಡೆ ಮತ್ತು ಜಂಟಿ ಕೋಶಾಧಿಕಾರಿಯಾಗಿ ವಿಕ್ಟರ್ ಮೆನೆಜಿಸ್ ಅವರು ಆಯ್ಕೆಯಾದರು. ನೂತನ ಕಾರ್ಯಕಾರಿ ಸಮಿತಿಗೆ ಒಟ್ಟು 31 ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು.
ನಿರ್ಗಮಿತ ಅಧ್ಯಕ್ಷ ಸಂತೋಷ ಶೆಟ್ಟಿ ಅವರು ಸ್ವಾಗತಿಸಿದರು. ನಿರ್ಗಮಿತ ಪ್ರ.ಕಾರ್ಯದರ್ಶಿ ನೆಲ್ಸನ್ ಡಿಸೋಜಾ ಅವರು ಸಂಘದ ಚಟುವಟಿಕೆ ಗಳನ್ನು ವಿವರಿಸಿದರು. ಮಹೇಶ ಹೆಗ್ಡೆ ಅವರು ಹಣಕಾಸು ವರದಿಯನ್ನು ಮಂಡಿಸಿದರು. ನಿತಿನ್ ರೈ ಕುಕ್ಕುವಳ್ಳಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಅನ್ವರ್ ಖುರ್ಷಿದ್,ರೋಶನ್ ಶಬ್ಬೀರ್ ಮತ್ತು ಅಬ್ಬಾಸ್ ಉಚ್ಚಿಲ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.