ಬಂಟ್ವಾಳ ನಗರ ಪೊಲೀಸ್ ಠಾಣೆ ಎಎಸ್ಸೈಯಾಗಿ ಅವಿನಾಶ್
ಬಂಟ್ವಾಳ, ನ. 22: ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್ಸೈಯಾಗಿ ಅವಿನಾಶ್ ಅವರು ಇಂದು ಮಧ್ಯಾಹ್ನ ಜಾರ್ಜ್ ತೆಗೆದುಕೊಂಡಿದ್ದಾರೆ.
ಈ ಮೊದಲಿದ್ದ ಠಾಣಾ ಎಸ್ಸೈ ಚಂದ್ರಶೇಖರ್ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಹಿನ್ನೆಲೆ ಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಎಸ್ಸೈಯಾಗಿದ್ದ ಅವಿನಾಶ್ ಅವರು ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಯಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ನಗರ ಠಾಣಾ ಪ್ರೋಬೆಷನರಿ ಎಸ್ಸೈ ಕುಮಾರ್, ಎಎಸ್ಸೈ ಜಯರಾಮ್ ಹಾಗೂ ಠಾಣಾ ಸಿಬ್ಬಂದಿ ಹಾಜರಿದ್ದರು.
Next Story