ಮಂಜನಾಡಿ: ಬಟ್ಟೆ ಒಣ ಹಾಕುತ್ತಿದ್ದ ವೇಳೆ ವಿದ್ಯುತ್ ಆಘಾತ; ಮಹಿಳೆ ಮೃತ್ಯು
ಕೊಣಾಜೆ, ಡಿ.4: ಬಟ್ಟೆ ಒಣಗಿಸಲು ಹಾಕುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಜನಾಡಿ ಗ್ರಾಮದ ಅಸೈ ಮದಕ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ಅಸೈ ಮದಕ ನಿವಾಸಿ ನಾಗೇಶ್ ಎಂಬವರ ಪತ್ನಿ ರೋಹಿಣಿ (30) ಮೃತಪಟ್ಟವರು.
ರೋಹಿಣಿ ಬಟ್ಟೆ ಒಗೆದು ಬಳಿಕ ಅದನ್ನು ಒಣಗಿಸಲು ಅಂಗಳದಲ್ಲಿ ಕಟ್ಟಿದ್ದ ಹಗ್ಗಕ್ಕೆ ಹಾಕುತ್ತಿದ್ದಾಗ ಅಂಗಳಕ್ಕೆ ಬಲ್ಬ್ ಹಾಕಲು ಎಳೆದಿದ್ದ ವಿದ್ಯುತ್ ವಯರ್ ಗೆ ಆಕಸ್ಮಿಕವಾಗಿ ತಗುಲಿತ್ತು ಎನ್ನಲಾಗಿದೆ. ಈ ಸಂದರ್ಭ ಅವರಿಗೆ ವಿದ್ಯುತ್ ಶಾಕ್ ತಗಲಿದೆ. ಇದನ್ನು ಅರಿತ ಮನೆ ಸಮೀಪದವರು ಮೈನ್ ಸ್ವಿಚ್ ತೆಗೆದು ಅವರನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.
ಮೃತರು ಪತಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪತಿ, ಪತ್ನಿ ಇಬ್ಬರೂ ಬೀಡಿ ಕಟ್ಟಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಇತ್ತೀಚೆಗೆ ನಾಗೇಶ್ ದೇರಳಕಟ್ಟೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.
Next Story