ಅಕ್ರಮ ಕೋಣ ಸಾಗಾಟ ಆರೋಪ: ಮೂವರ ಬಂಧನ
ಬೈಂದೂರು, ಡಿ.4: ಲಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಬೈಂದೂರು ಪೊಲೀಸರು ಯಡ್ತರೆ ಗ್ರಾಮದ ಅಂಬಿಕಾ ಉಪಹಾರ ಹೋಟೆಲ್ ಎದುರಗಡೆ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಡಿ.3ರಂದು ಬೆಳಗ್ಗೆ 10.45ರ ಸುಮಾರಿಗೆ ಬಂಧಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಸಾಂಗ್ಲಿಯ ದತ್ತಾ ಜಾದವ್(31), ಯೂನಸ್ ಅಜಿಜ್ ಮುಜಾವಾರ್(44), ಕೇರಳ ಕಣ್ಣೂರಿನ ಮುನಾಫ್ ಕುಂಞಿ ಪರಂಬಾತ್(29) ಬಂಧಿತ ಆರೋಪಿಗಳು.
ಈ ಸಂದರ್ಭ ಆರೋಪಿಗಳು ಕ್ರಯ ಚೀಟಿಯನ್ನು ಹಾಜರುಪಡಿಸಿದ್ದು, ಇದರಲ್ಲಿ 20 ಕೋಣಗಳ ಪರವಾನಿಗೆ ಪತ್ರ ಇದ್ದರೆ, ಉಳಿದ 6 ಕೋಣಗಳಿಗೆ ಯಾವುದೇ ಪರವಾನಿಗೆ ಪತ್ರ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು 52,000 ರೂ. ಮೌಲ್ಯದ 26 ಕೋಣಗಳನ್ನು ಮತ್ತು ಲಾರಿಯನ್ನು ವಶಪಡಿಸಿಕೊಂಡರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story