ಸುರತ್ಕಲ್ ಟೋಲ್ ಗೇಟ್ ಸಿಬ್ಬಂದಿಯಿಂದ ವಾಹನ ಸವಾರರ ಮೇಲೆ ದೌರ್ಜನ್ಯ: ಆರೋಪ
ವೀಡಿಯೊ ವೈರಲ್
ಮಂಗಳೂರು, ಡಿ.10: ಸುರತ್ಕಲ್ನ ಎನ್ಐಟಿಕೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಗೇಟ್ನಲ್ಲಿ ವಾಹನ ಸವಾರರ ಮೇಲೆ ಟೋಲ್ ಗೇಟ್ ಸಿಬ್ಬಂದಿ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಈ ಟೋಲ್ ಗೇಟ್ ಸಿಬ್ಬಂದಿ ಬಸ್ ಸಹಿತ ಇತರ ವಾಹನ ಸವಾರರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇರೀತಿ ಟೋಲ್ ಗೇಟ್ ಸಿಬ್ಬಂದಿಯು ಸೋಮವಾರ ಬಸ್ಸೊಂದನ್ನು ಟೋಲ್ ಗೇಟ್ ಬಳಿ ನಿಲ್ಲಿಸಿ ಅದರ ಚಾಲಕನನ್ನು ತರಾಟೆಗೈಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂವರು ಸಿಬ್ಬಂದಿ ಬಸ್ ಸಿಬ್ಬಂದಿಯನ್ನು ಕೆಳಗಿಳಿಯುವಂತೆ ಬಲವಂತಪಡಿಸಿ ಬಸ್ಸಿಗೆ ಕೈಯಿಂದ ಬಡಿಯುತ್ತಿರುವ ದೃಶ್ಯ ವೀಡಿಯೊದಲ್ಲಿದೆ.
ಈ ಟೋಲ್ ಗೇಟ್ ಸಿಬ್ಬಂದಿ ವರ್ಗಕ್ಕೆ ಯಾವುದೇ ಸಮವಸ್ತ್ರ ಇಲ್ಲ. ಇವರು ವಾಹನ ಸವಾರರೊಂದಿಗೆ ಒರಟಾಗಿ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story