ಬಜ್ಪೆ : ಟಿಪ್ಪರ್ ಪಲ್ಟಿ ; ಚಾಲಕನಿಗೆ ಗಾಯ
ಬಜ್ಪೆ : ಟಿಪ್ಪರೊಂದು ಅಪಘಾತ ತಪ್ಪಿಸಲು ಹೋಗಿ ಸಮೀಪದ ಗದ್ದೆಗೆ ಮಗುಚಿ ಬಿದ್ದ ಘಟನೆ ಎಡಪದವು ಗರೋಡಿ ಬಳಿ ಮಂಗಳವಾರ ನಡೆದಿದೆ.
ಟಿಪ್ಪರ್ ಮೂಡಬಿದಿರೆ ಕಡೆಯಿಂದ ಬರುತ್ತಿದ್ದು, ಈ ಸಂದರ್ಭ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನವೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿದ ಟಿಪ್ಪರ್ ಚಾಲಕ ನಂತರ ಟಿಪ್ಪರ್ ಗದ್ದೆಗೆ ಮಗುಚಿ ಬಿದ್ದಿದೆ. ಘಟನೆಯಲ್ಲಿ ಟಿಪ್ಪರ್ ಚಾಲಕನು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
Next Story