ಡಿ.15ರಂದು ಮಂಗಳೂರಿನಲ್ಲಿ ಮಹಿಳಾ ರಕ್ತದಾನ ಶಿಬಿರ, ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಂಗಳೂರು, ಡಿ.14: ಬ್ಲಡ್ ಡೋನರ್ಸ್ ಮಂಗಳೂರು ವುಮೆನ್ಸ್ ವಿಂಗ್ ಹಾಗೂ ದೇರಳಕಟ್ಟೆಯ ಯೆನೆಪೊಯ ವೈದ್ಯಕೀಯ ಆಸ್ಪತ್ರೆಯ ಜಂಟಿ ಸಹಯೋಗದಲ್ಲಿ ಮಹಿಳೆಯರಿಗೆ ರಕ್ತದಾನ ಶಿಬಿರ ಹಾಗೂ ಮಹಿಳೆಯರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಡಿ.15ರಂದು ಬಂದರ್ ನ ಸರಕಾರಿ ಉರ್ದು ಶಾಲೆಯಲ್ಲಿ ಆಯೋಜಿಸಲಾಗಿದೆ.
ಮಹಿಳೆಯರಿಂದ ಮಹಿಳೆಯರಿಗಾಗಿ ನಡೆಯುವ ಕಾರ್ಯಕ್ರಮ ಹಾಗೂ ಶಿಬಿರವನ್ನು ಅನುಗ್ರಹ ಮಹಿಳಾ ಕಾಲೇಜಿನ ಪ್ರಾಂಶುಂಪಾಲೆ ಗೀತಾ ಭಟ್ ಉದ್ಘಾಟಿಸುವರು. ಬಿಡಿಎಂ ವುಮೆನ್ಸ್ ವಿಂಗ್ ಗೌರವಾಧ್ಯಕ್ಷೆ ಆಯಿಷಾ ಯು.ಕೆ.ಉಳ್ಳಾಲ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಝೀನತ್ ಶಂಸುದ್ದೀನ್, ಸಹನಾ ಕೌನ್ಸಿಲಿಂಗ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷೆ ಶಹನಾಝ್ ಎಂ., ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಫ್ಲೋರಾ ಕ್ಯಾಸ್ತಲಿನೋ ,
ಬಂದರ್ ಸರಕಾರಿ ಹಿ ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಬಶೀರಾ ಖಾನ್ ಹಾಗೂ ಶಾಲಾ ಸಹಶಿಕ್ಷಕಿ ಸುನಾಲಿನಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story