ತಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ ನೂತನ ಅಧ್ಯಕ್ಷರಾಗಿ ಅಬ್ಬಾಸ್ ಮದನಿ ಬರಮೇಲು ಆಯ್ಕೆ
ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರೂ ಹಿರಿಯ ವಿದ್ವಾಂಸರೂ ಆದ ಶೈಖುನಾ ಹೈದರ್ ಮದನಿ ಉಸ್ತಾದರ ಶಿಷ್ಯಂದಿರ ಒಕ್ಕೂಟ ತಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಶೈಖುನಾ ಕೆ.ಎಂ ಉಸ್ತಾದರ ನಿವಾಸ ಕರಾಯದಲ್ಲಿ ಜರಗಿತು.
ನೂತನ ಅಧ್ಯಕ್ಷರಾಗಿ ಅಬ್ಬಾಸ್ ಮದನಿ ಬರಮೇಲು, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಪಿ ಮುಸ್ತಫಾ ಮದನಿ ಉರುವಾಲುಪದವು, ಕೋಶಾಧಿಕಾರಿಯಾಗಿ ಅಬ್ಬಾಸ್ ನಿಝಾಮಿ ಆಯ್ಕೆಯಾದರು.
ಸದ್ರಿ ಸಮಿತಿಯ ಉಪಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಸಖಾಫಿ ಕುಪ್ಪೆಟ್ಟಿ, ಅಶ್ರಫ್ ಸಖಾಫಿ ಮಾಡಾವು, ಜೊತೆ ಕಾರ್ಯದರ್ಶಿಗಳಾಗಿ ಶಾಫಿ ಮದನಿ ಕರಾಯ, ಸಿನಾನ್ ಮದನಿ ಕಲ್ಲಡ್ಕ, ವೆಲ್ಫೇರ್ ಕನ್ವೀನರ್ಗಳಾಗಿ ಯು.ಪಿ ಮುಹಮ್ಮದ್ ಸಖಾಫಿ ಉರುವಾಲುಪದವು, ಅಶ್ರಫ್ ಸಅದಿ ಪಟ್ಟೋರಿ, ಹನೀಫ್ ಮುಸ್ಲಿಯಾರ್ ವಿಟ್ಲ ಹಾಗು 14 ಕಾರ್ಯಕಾರಿ ಸದಸ್ಯರನ್ನು ನೇಮಕ ಮಾಡಲಾಯಿತು..
Next Story