ಮೂರು ವರ್ಷಗಳಿಂದ ನಾಪತ್ತೆ
ಮಲ್ಪೆ, ಡಿ.19: ಕಲ್ಯಾಣಪುರದ ಅಗಸನಕೆರೆಯ ನಿವಾಸಿ ಸುರೇಶ್ ನಾಯ್ಕ್ (37) ಎಂಬವರು ಕಳೆದ ಮೂರು ವರ್ಷಗಳಿಂದ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ನಾಯ್ಕ 2016ರಲ್ಲಿ ಬೆಂಗಳೂರಿನ ಪೀಣ್ಯ ಇಂಡಸ್ಟ್ರೀಯಲ್ಲಿ ಕೆಲಸ ಇರುವುದಾಗಿ ತಿಳಿಸಿ ಹೋಗಿದ್ದು, ನಂತರ ಅವರು 4-5 ಬಾರಿ ಊರಿಗೆ ಬಂದು ಹೋಗಿದ್ದರು. ಕೊನೆಯದಾಗಿ 2016ರ ಡಿಸೆಂಬರ್ನಲ್ಲಿ ಮನೆಗೆ ಬಂದು ಹೋದವರು, ನಂತರ 2017ರ ಜೂನ್ ತನಕ ಮೊಬೈಲ್ ಸಂಪರ್ಕದಲ್ಲಿದ್ದರು. ಅದರ ಅವರು ಯಾವುದೇ ರೀತಿ ಸಂಪರ್ಕ ಇಲ್ಲದೆ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story