ಗಾಯಕ ಶರೀಫ್ ಬೆಳ್ಳಾರೆ ನಿಧನ
ಸುಳ್ಯ : ತಾಲೂಕಿನ ಬೆಳ್ಳಾರೆಯ ಸಮೀಪದ ಪಾಲ್ತಾಡ್ ನಿವಾಸಿ ಅಬ್ಬಾಸ್ ಅವರ ಪುತ್ರ ಖ್ಯಾತ ಗಾಯಕ ಶರೀಫ್ ಬೆಳ್ಳಾರೆ ಅನಾರೋಗ್ಯದಿಂದ ರವಿವಾರ ಸಂಜೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಬ್ಯಾರಿ, ಮಾಪಿಲಾ ಮತ್ತು ಕನ್ನಡ ಹಾಡುಗಳ ಮೂಲಕ ಹಲವಾರು ಅಭಿಮಾನಿ ಬಳಗವನ್ನು ಹೊಂದಿದ್ದರು.
ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳು, ಮೂವರು ಸಹೋದರರು, ಓರ್ವ ಸಹೋದರಿ ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ಸೋಮವಾರ ಬೆಳಗ್ಗೆ 8ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story