ವಿನ್ಯಾಸ್ ಟೈಲರಿಂಗ್ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ
ಮಂಗಳೂರು,ಜ.1, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ವಿನ್ಯಾಸ್ ಟೈಲರಿಂಗ್ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣಾ ಸಮಾರಂಭವು ಸುಜೀರು ದ.ಕ.ಜಿ.ಪ ಉನ್ನತೀಕರಿಸಿದ ಹಿ.ಪ್ರಾ ಶಾಲೆ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಸಮಾರಂಭವನ್ನು ಡಾ. ಆಯಿಷಾ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಯವತಿ ಮುಖ್ಯ ಶಿಕ್ಷಕರು ದ.ಕ.ಜಿ.ಪ ಉನ್ನತೀಕರಿಸಿದ ಹಿ.ಪ್ರಾ ಶಾಲೆ ಸುಜೀರು, ಶಶಿಮಂಗಳ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಸುಜೀರು, ಖೈರುನ್ನಿಸಾ ಮಜೀದ್ ಸುರಲ್ಪಾಡಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ವುಮೆನ್ಸ್ ಫೌಂಡೇಶನ್ನ ಸ್ಥಾಪಕಾಧ್ಯಕ್ಷೆ ಶಬೀನಾ ಅಕ್ತರ್ ವಹಿಸಿದ್ದರು.
ಟೈಲರಿಂಗ್ ಶಿಕ್ಷಕಿ ದಿಲ್ಶಾದ್ ರವರನ್ನು ಮುಮ್ತಾಝ್ ಪಕ್ಕಲಡ್ಕ ಸನ್ಮಾನಿಸಿದರು. ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆತಿಕಾ ರಫೀಕ್ ಸ್ವಾಗತಿಸಿದರು, ಝೊಹರಾ ಉಳ್ಳಾಲ ಧನ್ಯವಾದಗೈದರು
Next Story