ಕಾಸರಗೋಡು: ಎಸ್ ಡಿಪಿಐ -ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಘರ್ಷಣೆ; ಇಬ್ಬರಿಗೆ ಇರಿತ
ಕಾಸರಗೋಡು, ಜ.14: ಎಸ್ ಡಿಪಿಐ ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು, ಇಬ್ಬರು ಚೂರಿ ಇರಿತಕ್ಕೊಳಗಾದ ಘಟನೆ ನಿನ್ನೆ ರಾತ್ರಿ ಎಡನೀರಿನಲ್ಲಿ ಸಂಭವಿಸಿದೆ.
ಇರಿತದಿಂದ ಗಂಭೀರ ಗಾಯಗೊಂಡಿರುವ ಆಸಿಫ್ (25) ಮತ್ತು ರಶೀದ್ (28) ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೋಸ್ಟರ್ ಲಗತ್ತಿಸುವ ಕುರಿತ ಉಂಟಾದ ವಿವಾದ ಘರ್ಷಣೆಗೆ ಕಾರಣ ಎಂದು ತಿಳಿದುಬಂದಿದೆ. ಲಗತ್ತಿಸಿದ ಪೋಸ್ಟರ್ ಹರಿದ ಬಗ್ಗೆ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆಗೆ ತಿರುಗಿತ್ತೆನ್ನಲಾಗಿದೆ. ಈ ಸಂದರ್ಭದಲ್ಲಿ ಇಬ್ಬರು ಇರಿತಕ್ಕೊಳಗಾಗಿದ್ದಾರೆ. ಗಾಯಾಳುಗಳು ಎಸ್ ಡಿಪಿಐ ಕಾರ್ಯಕರ್ತರು ಎಂದು ತಿಳಿದು ಬಂದಿದೆ.
ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Next Story