ಪ್ರಜ್ಞಾಸಲಹಾ ಕೇಂದ್ರದ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು, ಜ.16: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಐಸಿಪಿಎಸ್ ಪ್ರಾಯೋಜಿತ ಪ್ರಜ್ಞಾ ಅರ್ಹ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಮಾಸಿಕ ನಿಗದಿತ ಗೌರವಧನ ಆಧಾರದಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಅಧೀಕ್ಷಕರ ಹುದ್ದೆ 25,000 ರೂ. (ಎಂಎಸ್ಡಬ್ಲು ಮೆಡಿಕಲ್ ಆ್ಯಂಡ್ ಸೈಕ್ಯಾಟ್ರಿಕ್), ಆಪ್ತ ಸಮಾಲೋಚಕರ ಹುದ್ದೆ 17,500 ರೂ.(ಎಂ.ಎಸ್.ಡಬ್ಲು ಮೆಡಿಕಲ್ ಆ್ಯಂಡ್ ಸೈಕ್ಯಾಟ್ರಿಕ್), ಗೃಹಮಾತೆ ಹುದ್ದೆ 11,000 (ಪದವೀಧರರು), ಹೌಸ್ ಕೀಪರ್ ಹುದ್ದೆ 6,000 ರೂ. (7ನೇ ತರಗತಿ), ವಿದ್ಯಾರ್ಹತೆ ಹೊಂದಿರುವ ಮತ್ತು ಪ್ರಜ್ಞಾ ಸ್ವಾಧಾರ ಗೃಹಕ್ಕೆ ಚೌಕಿದಾರ್ ಹುದ್ದೆಗೆ 5,000 ರೂ. ಗೌರವ ಧನ (8ನೇ ತರಗತಿ) ಆಧಾರದಲ್ಲಿ 18 ರಿಂದ 38 ವರ್ಷ ವಯೋಮಿತಿಯುಳ್ಳ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜ.21 ಹೆಚ್ಚಿನ ಮಾತಿಗಾಗಿ ನಿರ್ದೇಶಕರು, ಪ್ರಜ್ಞಾ ಸಲಹಾ ಕೇಂದ್ರ, ಫಳ್ನೀರ್ ರೋಡ್, ಕಂಕನಾಡಿ, ಮಂಗಳೂರು ದೂರವಾಣಿ ಸಂಖ್ಯೆ- 0824-2432682 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.