ಬೋಳಿಯಾರ್: ವ್ಯಕ್ತಿ ನಾಪತ್ತೆ
ಮಂಗಳೂರು, ಜ.20: ಬೋಳಿಯಾರ್ ಗ್ರಾಮದ ರಂತಡ್ಕ ಎಂಬಲ್ಲಿನ ಅಬ್ದುಲ್ ರಹ್ಮಾನ್ (42) ಎಂಬವರು ತನ್ನ ಮನೆಯಿಂದ ಕಾಣೆಯಾದ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.
4.9 ಅಡಿ ಎತ್ತರ, ಎಣ್ಣೆ ಕಪ್ಪುಮೈಬಣ್ಣ, ದೃಢಕಾಯ ಶರೀರ, ಕಪ್ಪುಬಣ್ಣದ ಪ್ಯಾಂಟ್ ಮತ್ತು ಗ್ರೇ ಬಣ್ಣದ ಶರ್ಟ್ ಧರಿಸಿರುವ ಇವರು ಕನ್ನಡ, ತುಳು, ಮಾಲಯಾಳಂ ಮಾತನಾಡುತ್ತಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ದೂ.ಸಂ: 0824-2220536, 9480802350 ಅಥವಾ 0824-2220800ನ್ನು ಸಂಪರ್ಕಿಸಲು ತಿಳಿಸಲಾಗಿದೆ.
Next Story