ಬೆಂಗಳೂರಿನಲ್ಲಿ ಟೈಕೊಂಡೊ ಚಾಂಪಿಯನ್ ಶಿಪ್: ಗೂಡಿನಬಳಿಯ ಮುಹಮ್ಮದ್ ಫಾಝಿಲ್ ಗೆ ಚಿನ್ನ
ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ನಡೆದ 3ನೆ ವರ್ಷದ ವೀಫಾ ಕಪ್ ಸೌತ್ ಝೋನ್ ಟೈಕೊಂಡೊ ಮತ್ತು ಪುಮ್ಸೆ ಚಾಂಪಿಯನ್ ಶಿಪ್ ನ 35 ಕೆಜಿ ವಿಭಾಗದಲ್ಲಿ ಗೂಡಿನಬಳಿಯ ಮುಹಮ್ಮದ್ ಫಾಝಿಲ್ ಚಿನ್ನದ ಪದಕ ಗಳಿಸಿದ್ದಾರೆ.
ಮಂಗಳವಾರ ಬಿ.ಸಿ.ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ 1ನೆ ದಕ್ಷಿಣ ಕನ್ನಡ ಟೈಕೊಂಡೊ ಚಾಂಪಿಯನ್ ಶಿಪ್ ನಲ್ಲಿ ಪುಮ್ಸೆಯಲ್ಲಿ ಚಿನ್ನ ಮತ್ತು ಫೈಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಬಂಟ್ವಾಳದ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ 7ನೆ ತರಗತಿ ವಿದ್ಯಾರ್ಥಿಯಾಗಿರುವ ಮುಹಮ್ಮದ್ ಫಾಝಿಲ್ ಗೂಡಿನಬಳಿಯ ಮುಸ್ತಫ - ಅಸ್ಮತ್ ದಂಪತಿಯ ದ್ವಿತೀಯ ಪುತ್ರ. ಇವರಿಗೆ ಇಸಾಕ್ ನಂದಾವರ ತರಬೇತಿ ನೀಡುತ್ತಿದ್ದಾರೆ.
Next Story