ಆಂಧ್ರ ಬ್ಯಾಂಕ್ನ ಮಾಜಿ ಸಿಎಂಡಿ ಡಾ. ವಸಂತನ್ ನಿಧನ
ಮಂಗಳೂರು, ಜ. 24: ಆಂಧ್ರ ಬ್ಯಾಂಕ್ನ ಮಾಜಿ ಸಿಎಂಡಿ ಡಾ. ಬಿ. ವಸಂತನ್ (76 )ಇಂದು ನಿಧನರಾಗಿದ್ದಾರೆ.
ಕೇರಳ ಯುನಿವರ್ಸಿಟಿಯಿಂದ ಬಿಕಾಂನಲ್ಲಿ ಚಿನ್ನದ ಪದಕ ಪಡೆದಿರುವ ಅವರು, 1965ರಲ್ಲಿ ಸಿಂಡಿಕೇಟ್ ಬ್ಯಾಂಕ್ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. 1998ರಲ್ಲಿ ಆಂಧ್ರ ಬ್ಯಾಂಕ್ಗೆ ಸೇರ್ಪಡೆಗೊಂಡ ಅವರು, 2003ರಲ್ಲಿ ಬ್ಯಾಂಕ್ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ನಿವೃತ್ತರಾಗಿದ್ದರು. 2004-05ರಲ್ಲಿ ಮಸ್ಕರ್ನ ನ್ಯಾಷನಲ್ ಬ್ಯಾಂಕ್ ಆಫ್ ಒಮನ್ನ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು.
ಮೃತರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಆಗಲಿದ್ದಾರೆ.
Next Story