ಜ.28ರಂದು ಜೀವನ ಕೌಶಲ್ಯ ಕಾರ್ಯಕ್ರಮ
ಉಡುಪಿ, ಜ.24: ಸೈಂಟ್ ಮೇರಿಸ್ ಕಾಲೇಜು ಶಿರ್ವ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ಆಶ್ರಯದಲ್ಲಿ ಒಂದು ದಿನದ ಜೀವನ ಕೌಶಲ್ಯ ಕಾರ್ಯಾಗಾರ ಜ.28ರಂದು ಬೆಳಗ್ಗೆ 10 ಗಂಟೆಗೆ ಪಾ. ಹೆನ್ರಿ ಕ್ಯಾಸ್ತಲಿನೋ ಆಡಿಟೋರಿಯಮ್ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದು, ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ಸಂಚಾಲಕ ವಂ. ಡೆನಿಸ್ ಎ. ಡೇಸಾ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ಎನ್ನೆಸ್ಸೆಸ್ ಯೊಜನಾಧಿಕಾರಿ ಪ್ರೇಮನಾಥ್, ಯುವ ಸಮಾಲೋಚಕಿ ಶ್ಯಾಮಲ ಕಿರಣ್, ಯುವ ಪರಿವರ್ತಕ ಪಾರ್ಥಸಾರಥಿ ಕುಂಜಾರುಗಿರಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜನ್ ವಿ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story