ನಂದಿಗುಡ್ಡೆ : ಫುಡ್ ಟ್ರಕ್ ಶುಭಾರಂಭ
ವೈವಿಧ್ಯಮಯ ಕಬಾಬ್ ಗಳ ವಾಹನ
ಮಂಗಳೂರು, ಜ. 25 : ಟಿಕ್ಕಾ, ಕಬಾಬ್ ಸಹಿತ ವೈವಿಧ್ಯಮಯ ತಿಂಡಿ ತಿನಿಸುಗಳ ನೂತನ ವಾಹನ 'ಫುಡ್ ಟ್ರಕ್ ' ನಗರದ ನಂದಿಗುಡ್ಡೆ ಮುಖ್ಯರಸ್ತೆಯಲ್ಲಿ ಶುಕ್ರವಾರ ಸಂಜೆ ಶುಭಾರಂಭಗೊಂಡಿತು.
ಸಂಜೆ 5 ರಿಂದ ಪ್ರಾರಂಭವಾಗಿ ರಾತ್ರಿ 10 ವರೆಗೆ ತೆರೆದಿರುವ ಈ ಫುಡ್ ಟ್ರಕ್ ನಲ್ಲಿ ವಿಭಿನ್ನ ರುಚಿಯ ವಿವಿಧ ಕಬಾಬ್ ಗಳು, ಟಿಕ್ಕಾ, ಪಾಸ್ತಾ, ಪರೋಟ, ಚಪಾತಿ, ಮೀನಿನ ಖಾದ್ಯಗಳು ಇತ್ಯಾದಿಗಳು ಮಿತ ದರದಲ್ಲಿ ಲಭ್ಯ ಎಂದು ಫುಡ್ ಟ್ರಕ್ ಮಾಲಕ ರಶೀದ್ ರಾಶ್ ಬ್ಯಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.