ಬಂಟಕಲ್ಲಿನಲ್ಲಿ ಸರಣಿ ಕಳ್ಳತನ
ಶಿರ್ವ, ಜ.27: ಬಂಟಕಲ್ಲು ಬಿಸಿರೋಡ್ ಎಂಬಲ್ಲಿ ಬಾರ್ಗೆ ನುಗ್ಗಿದ ಕಳ್ಳರು ನಗದು ಕಳವು ಮಾಡಿರುವ ಘಟನೆ ಜ.26ರಂದು ರಾತ್ರಿ ವೇಳೆ ನಡೆದಿದೆ.
ಶಿರ್ವ ನಜರತ್ ನಗರದ ಜಯಪಾಲ್ ಶೆಟ್ಟಿ ಎಂಬವರ ಬಾರ್ ಶೆಟರನ್ನು ಮುರಿದು ಒಳನುಗ್ಗಿದ ಕಳ್ಳರು, ಕ್ಯಾಶ್ ಕೌಂಟರ್ನಲ್ಲಿದ್ದ 5000 ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ.
ಅಲ್ಲಿಂದ ಕಳ್ಳರು, ಪಕ್ಕದಲ್ಲಿರುವ ಅಂಬ್ರೋಸ್ ಡಿಸೋಜ ಎಂಬವರ ಜೋಶ್ವಾ ಸ್ಟೋರ್ಸ್ ಅಂಗಡಿಯ ಶೆಟರ್ ಮುರಿದು ಒಳನುಗ್ಗಿ ಕ್ಯಾಶ್ ಕೌಂಟರಿನಲ್ಲಿದ್ದ ಚಿಲ್ಲರೆ ಹಣವನ್ನು ಕಳವು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story