ಮಂಗಳೂರು: ಜ.29-30ರಂದು ಜೆಪ್ಪು ರೈಲ್ವೆ ಗೇಟ್ ಬಂದ್
ಮಂಗಳೂರು, ಜ. 28: ಹಳಿ ತಪಾಸಣೆ ಮತ್ತು ನಿರ್ವಹಣೆಯ ಹಿನ್ನೆಲೆಯಲ್ಲಿ ಜ. 29ರ ರಾತ್ರಿ 8ರಿಂದ ಜ.30ರ ಸಂಜೆ 5ರವರೆಗೆ ಜೆಪ್ಪು ಮಹಾಕಾಳಿಪಡ್ಪು ಬಳಿ ಇರುವ ರೈಲ್ವೆ ಗೇಟ್ ಅನ್ನು ಮುಚ್ಚಲಾಗುವುದು.
ಹಾಗಾಗಿ ಈ ರಸ್ತೆಯ ಮೂಲಕ ಪ್ರಯಾಣಿಸುವ ಸಾರ್ವಜನಿಕರು ಗೋರಿಗುಡ್ಡ ಅಥವಾ ಪಂಪ್ವೆಲ್ ಮೂಲಕ ಪ್ರಯಾಣಿಸಲು ರೈಲ್ವೆ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
Next Story