ಹೆಬ್ರಿ: ಬಂದೂಕು ಮಾರಾಟದ ಅಂಗಡಿಯಿಂದ ನಾಲ್ಕು ಕೋವಿ ಕಳವು
ಹೆಬ್ರಿ, ಜ.29: ಹೆಬ್ರಿ ಕೆನರಾ ಬ್ಯಾಂಕ್ ಬಳಿಯ ರೋಹಿದಾಸ್ ಶೆಣೈ ಎಂಬವರ ಬಂದೂಕು ಮಾರಾಟದ ಅಂಗಡಿಗೆ ಜ.28ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ನಾಲ್ಕು ಬಂದೂಕುಗಳನ್ನು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.
ಲೈಸನ್ಸ್ ಹೊಂದಿರುವ ಮದ್ದುಗುಂಡು ಹಾಗೂ ಬಂದೂಕು ಡಿಪಾಸಿಟ್ ಮತ್ತು ಬಂದೂಕು ಮಾರಾಟದ ಅಂಗಡಿಯ ಮೇಲಿನ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಸುಮಾರು 2001ನೇ ಇಸವಿಯಲ್ಲಿ ಡಿಪಾಸಿಟ್ ಇಟ್ಟಿರುವ ಹಳೆಯ ಎರಡು ಎಸ್ಬಿಎಂಎಲ್ ಕೋವಿ, ಒಂದು ಎಸ್ಬಿಬಿಎಲ್ ಕೋವಿ ಹಾಗೂ ಒಂದು 0.177 ಮಾಡೆಲ್ ನ ಏರ್ ಗನ್ ಕಳವು ಮಾಡಿದ್ದಾರೆ.
ಕಳವಾದ ಕೋವಿಗಳ ಒಟ್ಟು ಮೌಲ್ಯ ಸುಮಾರು 11,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದ್ದು, ತನಿಖೆ ನಡೆಯುತ್ತಿದೆ.
Next Story