ಉಡುಪಿ: ಮಹಡಿಯ ಮೆಟ್ಟಿಲಿನಿಂದ ಬಿದ್ದು ವೃದ್ಧ ಮೃತ್ಯು
ಉಡುಪಿ, ಜ.29: ಮನೆಯ ಮಹಡಿಯ ಮೆಟ್ಟಿಲಿನಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜ.27ರಂದು ತಡರಾತ್ರಿ ವೇಳೆ ಬಡಗುಬೆಟ್ಟು ಗ್ರಾಮದ ಬೈಲೂರು ಎನ್ಜಿಓ ಕಾಲೋನಿಯಲ್ಲಿ ನಡೆದಿದೆ.
ಮೃತರನ್ನು ಎನ್ಜಿಓ ಕಾಲೋನಿ ನಿವಾಸಿ ಫಿಲಿಫ್ ನೇರಿ ಆ್ಯಂಟೋನಿ ವಾಝ್(67) ಎಂದು ಗುರುತಿಸಲಾಗಿದೆ. ಮನೆಯ ಮಹಡಿಯ ಮೆಟ್ಟಿಲಿನಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡ ಇವರು, ಜ.28ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story