ಹಬೀಬ್ ಉಪ್ಪಿನಂಗಡಿಗೆ ಡಾಕ್ಟರೇಟ್ ಪದವಿ
ಉಪ್ಪಿನಂಗಡಿ: ಕಿಂಗ್ಡಮ್ ವಿಶ್ವವಿದ್ಯಾಲಯ ಬಹರೈನ್ ಇದರ ಸಹ ಪ್ರಾಧ್ಯಾಪಕರಾದ ಡಾ. ಹಬೀಬ್ ಉರ್ ರಹ್ಮಾನ್ ಅವರ "ಇನ್ಫ್ಲುಯೆನ್ಸ್ ಆಫ್ ಕ್ವಾಲಿಟಿ ಆಫ್ ವರ್ಕ್ ಲೈಫ್, ಇಗೋ ಸ್ಟೇಟ್ಸ್ ಆ್ಯಂಡ್ ಜಾಬ್ ಆ್ಯಟ್ಟಿಟುಡ್ ಆನ್ ಒರ್ಗನೈಝೇಶನಲ್ ಕಮಿಟ್ಮೆಂಟ್ ಆ್ಯಂಡ್ ಪ್ರೊಡಕ್ಟಿವಿಟಿ ಆಫ್ ಬ್ಯಾಂಕ್ ಎಂಪ್ಲಾಯೀಸ್” ಎಂಬ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯಿಂದ ಡಾಕ್ಟರೇಟ್ ಲಭಿಸಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಸರ್ಚ್ ಗೈಡ್ ಫ್ರೊ. ರಶ್ಮಿ ಕೋಡಿಕಲ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಲಾಗಿತ್ತು.
ಲಂಡನ್ನಿನ ಹೈಯರ್ ಎಜುಕೇಶನ್ ಅಕಾಡಮಿಯಲ್ಲಿ ಫೆಲೋ ಆಗಿರುವ ಇವರು, ಉಪ್ಪಿನಂಗಡಿಯ ಯೂಸೂಫ್ ಹಾಗೂ ಆಯಿಷಾ ದಂಪತಿಯ ಪುತ್ರ.
ಇವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಕಾಂ ಮತ್ತು ಮಂಗಳೂರಿನ ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿರುತ್ತಾರೆ.
Next Story