ತೋಡಿಗೆ ಬಿದ್ದು ಅಪರಿಚಿತ ಮೃತ್ಯು
ಕೊಲ್ಲೂರು, ಫೆ.12: ಕೊಲ್ಲೂರು ಶ್ರೀಗಣೇಶ ಹೊಟೇಲ್ ಬಳಿಯ ಕೊಲ್ಲೂರು -ಹಾಲ್ಕಲ್ ಮುಖ್ಯರಸ್ತೆಯ ಮೋರಿಯ ತಡೆಗೋಡೆಯ ಮೇಲೆ ಫೆ.11ರಂದು ರಾತ್ರಿ ವೇಳೆ ಮಲಗಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಆಯತಪ್ಪಿ ಆಳದ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ.
50 ರಿಂದ 60 ವರ್ಷ ಪ್ರಾಯದ ಮೃತರು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವಠಾರದಲ್ಲಿ ಕಳೆದ ಕೆಲವು ಸಮಯಗಳಿಂದ ಭಿಕ್ಷೆ ಬೇಡುತ್ತಿದ್ದರು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story