ಭಟ್ಕಳದ ಅಂಜುಮನ್ ಸಂಸ್ಥೆಯ ಪ್ರಾಧ್ಯಾಪಕ ಇಕ್ಬಾಲ್ ಗೆ ಡಾಕ್ಟರೇಟ್
ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯ ಮತ್ತು ಪಿ.ಜಿ ಸೆಂಟರ್ ನ ಸಹಾಯಕ ಪ್ರಾಧ್ಯಾಪಕ ಪ್ರೊ. ಇಕ್ಬಾಲ್ ಆಹ್ಮದ್ ಎ.ಕೆ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಡಾಕ್ಟರೇಟ್ ಪದವಿ ಪ್ರದಾನಿಸಿದೆ.
ಇಕ್ಬಾಲ್ ಆಹ್ಮದ್ ಮಂಡಿಸಿದ ‘ಸಾಪ್ಟ್ ಕಂಪ್ಯೂಟಿಂಗ್ ಅಪ್ಲಿಕೇಶನ್ ಫಾರ್ ಪ್ರೋಕಾಸ್ಟಿಂಗ್ ಆ್ಯಂಡ್ ಕಂಟ್ರೋಲ್ ಆಫ್ ಡೈನಾಮಿಕ್ ಸಿಸ್ಟಮ್’ ಎಂಬ ಸಂಶೋಧನ ಪ್ರಬಂಧಕ್ಕೆ ಪಿಎಚ್ಡಿ ಪದವಿ ಪ್ರಾಪ್ತಿಯಾಗಿದೆ. ಮಂಗಳೂರು ಪಿ.ಎ ಕಾಲೇಜಿನ ಪ್ರಾಧ್ಯಾಪಕ ಡಾ.ಮುಹಮ್ಮದ್ ಫಝಲ್ ಅಝೀಮ್ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಪ್ರೊ.ಇಕ್ಬಾಲ್ ಭಟ್ಕಳದ ಅಂಜುಮನ್ ಸಂಸ್ಥೆಯಲ್ಲಿ ಕಳೆದ 23 ವರ್ಷಗಳಿಂದ ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನೀಯರಿಂಗ್ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Next Story