ಫೆ.13ರಂದು 'ಮಲ್ನಾಡ್ ಗಲ್ಸ್ ಅಸೋಸಿಯೇಶನ್ ರಿಯಾದ್' ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ
ರಿಯಾದ್ : ಕರ್ನಾಟಕದ ಮಲೆನಾಡಿನ ಮೂಲದ 'ಮಲ್ನಾಡ್ ಗಲ್ಸ್ ಅಸೋಸಿಯೇಶನ್ ರಿಯಾದ್' ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಫೆ.13ರಂದು ಜವಾಹರ್ ಅಲ್ ಖಲೀಜ್ ಇಂಡೋರ್ ಇಸ್ತಿರಾಜ್ ದಲ್ಲಿ ನಡೆಯಲಿದೆ.
2014 ರಲ್ಲಿ ದಮ್ಮಾಮ್ ನಲ್ಲಿ ಆರಂಭವಾದ ಮಲ್ನಾಡ್ ಗಲ್ಸ್ ಅಸೋಸಿಯೇಷನ್ ಸಂಘಟನೆಯು, ಪ್ರಸ್ತುತ ಸೌದಿ ಅರೇಬಿಯಾದ ಜುಬೈಲ್, ಅಲ್ ಖೋಬಾರ್, ರಿಯಾದ್, ಅಲ್ ಹಸ್ಸ, ಜಿದ್ದಾ, ಮದೀನಾದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಉದ್ಯೋಗ ಅರಸಿಕೊಂಡು ಬರುವವರಿಗೆ ನೆರವು, ಬಡ-ನಿರ್ಗತಿಕ-ಯತೀಮ್ ಮಕ್ಕಳಿಗೆ ವಿದ್ಯಾಭ್ಯಾಸದ ನೆರವು, ವೈದ್ಯಕೀಯ ನೆರವು, ಮದುವೆ ಮೊದಲಾದ ಅಗತ್ಯ ಆರ್ಥಿಕ ನೆರವು ನೀಡುವ ಯೋಜನೆಗಳ ಮೂಲಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ.
Next Story