ಮಂಗಳೂರು: ಯುವಕ ನಾಪತ್ತೆ
ಮಂಗಳೂರು, ಫೆ.15: ನಗರದ ಉಜ್ಜೋಡಿ ನಿವಾಸಿ ನವೀನ್ (32) ಎಂಬಾತ ತನ್ನ ಮನೆಯಿಂದ ಕಾಣೆಯಾದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
16.5 ಸೆ.ಮೀ.ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ದುಂಡು ಮುಖ. ಈತ ತುಳು, ಕನ್ನಡ, ಹಿಂದಿ ಮಾತನಾಡುತ್ತಾರೆ. ಇವರನ್ನು ಕಂಡವರು ಕಂಕನಾಡಿ ಠಾಣೆಗೆ ಮಾಹಿತಿ ನೀಡಲು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story