ಪ್ರವಾದಿ ನಿಂದನೆ: ಮಧುಗಿರಿ ಮೋದಿ ವಿರುದ್ಧ ಕೊಪ್ಪ ಮುಸ್ಲಿಂ ಒಕ್ಕೂಟದಿಂದ ದೂರು
ಕೊಪ್ಪ: ಮುಹಮ್ಮದ್ ಪೈಗಂಬರ್ ವಿರುದ್ಧ ಮಧುಗಿರಿ ಮೋದಿ ವಿರುದ್ಧ ಕೊಪ್ಪ ಮುಸ್ಲಿಂ ಒಕ್ಕೂಟದ ವತಿಯಿಂದ ಕೊಪ್ಪ ಪೋಲಿಸ್ ಠಾಣೆಗೆ ದೂರು ನೀಡಲಾಯಿತು.
ತುಮಕೂರಿನ ಮಧುಗಿರಿ ಮೋದಿ ಎಂಬಾತ ಪ್ರವಾದಿ ಮುಹಮ್ಮದ್ (ಸ) ಅವರನ್ನು ನಿಂದಿಸಿ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ದೇಶದ ಸಾಮಾಜಿಕ ಸಾಮರಸ್ಯ, ಸೌಹಾರ್ದತೆಗೆ ಧಕ್ಕೆ ತರುವಂತದಿದ್ದು ಕೂಡಲೇ ಆತನನ್ನು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗು ಸಾಮಾಜಿಕ ಜಾಲತಾಣದಲ್ಲಿರುವ ಸದರಿ ವೀಡಿಯೊವನ್ನು ಅಳಿಸಿ ಹಾಕಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಒಕ್ಕೂಟದ ಅಧ್ಯಕ್ಷ ಶೇಕ್ ಝಾವಿದ್, ಸಾದಿಕ್, ಬಿ. ಮಹಮ್ಮದ್, ತೌಹೀದ್, ಅತೀಕ್, ಅಬ್ದುಲ್ ರವೂಫ್, ಅಬ್ದುಲ್ ಮನ್ನಾ, ಮುನ್ನ ಮೊದಲಾದವರಿದ್ದರು.
Next Story