ಸಿಎ ಉಡುಪಿ ಶಾಖೆಗೆ ಪ್ರದೀಪ್ ಜೋಗಿ ಆಯ್ಕೆ
ಉಡುಪಿ, ಫೆ.19: ಭಾರತೀಯ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ ಪ್ರದೀಪ್ ಜೋಗಿ 2020-21ನೆ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯ 19ನೇ ಅಧ್ಯಕ್ಷರಾಗಿರುವ ಇವರು ಈ ಹಿಂದೆ ಸಂಸ್ಥೆಯ ಉಪಾಧ್ಯಕ್ಷ, ಖಜಾಂಚಿ, ಸಿಕಾಸಾ ಅಧ್ಯಕ್ಷ ಮುಂತಾದ ಹುದ್ದೆಗಳನ್ನು ನಿರ್ವಹಿಸಿದ್ದರು. ಉಪಾಧ್ಯಕ್ಷರಾಗಿ ಸಿಎ ಕವಿತಾ ಎಂ. ಪೈ, ಕಾರ್ಯದರ್ಶಿಯಾಗಿ ಸಿಎ ಲೋಕೇಶ್ ಶೆಟ್ಟಿ, ಖಜಾಂಚಿಯಾಗಿ ಸಿಎ ಪ್ರಭಾಕರ್ ಎನ್.ನಾಯಕ್, ಸದಸ್ಯರಾಗಿ ಸಿಎ ನರಸಿಂಹ ನಾಯಕ್ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story