ಗಾಂಜಾ ಸೇವನೆ: ಏಳು ಮಂದಿ ವಶಕ್ಕೆ
ಮಣಿಪಾಲ, ಫೆ.20: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೆ.7ರಂದು ಮಣಿಪಾಲ ಈಶ್ವರ ನಗರದ ಪವಿತ್ರ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಬಳಿ ಸ್ಟೀವ್ ಜಾರ್ಜ್(21) ಮತ್ತು ಗೋವಿಂದ ದಿಪೇಶ್(19) ಹಾಗೂ ಮಣಿಪಾಲ ಪೊಲೀಸ್ ಠಾಣೆಗೆ ಭೇಟಿ ನೀಡಿದ ರಿಷಬ್ ರಸ್ತೊಗಿ (20) ಫೆ.11ರಂದು, ಕಾರ್ತಿಕೇಯ ಗುಪ್ತ(21), ಅನನ್ಯ ಕೌಶಿಕ್(20) ಮತ್ತು ಶಾಶ್ವತ ಕುಮಾರ್(21) ಫೆ.12ರಂದು, ಮೈತ್ರೆಯಾ ಶರ್ಮ(21) ಎಂಬವರನ್ನು ಫೆ.13 ರಂದು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರುಪಡಿಸಿದ್ದು ಅವರನ್ನು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವಿಸಿರುವ ಬಗ್ಗೆ ಧೃಢಪತ್ರ ನೀಡಿದ್ದಾರೆ.
Next Story