ಮಂಗಳೂರು: ಕೋಸ್ಟ್ ಗಾರ್ಡ್ ನಾವಿಕ ನಾಪತ್ತೆ
ಮಂಗಳೂರು, ಫೆ.22: ಮಂಗಳೂರಿನ ಕೋಸ್ಟ್ ಗಾರ್ಡ್ನ ನಾವಿಕ ನಾಪತ್ತೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ ಕರಾವಳಿ ಪಡೆಯ ನಾವಿಕ, ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ನೆತಾಲ ಜ್ಯೋತಿ ಸ್ವರೂಪ್ (22) ನಾಪತ್ತೆಯಾದವರು.
ನಾವಿಕ ನೆತಾಲ ಅವರು ಪಣಂಬೂರಿನ ಕೋಸ್ಟ್ ಗಾರ್ಡ್ ಹೆಡ್ ಕ್ವಾರ್ಟರ್ಸ್ನಿಂದ ಫೆ.18ರಂದು ಮಧ್ಯಾಹ್ನ 2:30ಕ್ಕೆ ಕಾಣೆಯಾಗಿದ್ದಾರೆ. ನಾಪತ್ತೆ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಕೋಸ್ಟ್ ಗಾರ್ಡ್ನ ಜಿಲ್ಲಾ ಕಮಾಂಡರ್ ದೂರಿನಲ್ಲಿ ತಿಳಿಸಿದ್ದಾರೆ.
ಚಹರೆ: 166 ಸೆಂ.ಮೀ. ಎತ್ತರ, ಗೋಧಿ ಮೈಬಣ್ಣ, ದೃಢಕಾಯ ಶರೀರ, ಕಪ್ಪು ತಲೆಗೂದಲು, ತೆಲುಗು, ಹಿಂದಿ ಮಾತನಾಡುತ್ತಾರೆ.
ನಾಪತ್ತೆಯಾದ ವ್ಯಕ್ತಿ ಕಂಡುಬಂದಲ್ಲಿ ಪಣಂಬೂರು ಠಾಣೆ (0824- 2220530, 9480805355) ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.
Next Story