ಟೇಬಲ್-ಟೆನ್ನಿಸ್: ದಕ್ಷಿಣ ಭಾರತ ತಂಡಕ್ಕೆ ಪ್ರೇಕ್ಷಾ ಪರೇಶ್ ಆಯ್ಕೆ
ಮಂಗಳೂರು, ಫೆ.23: ಮಠಪತಿ ಟೇಬಲ್-ಟೆನ್ನಿಸ್ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿರುವ ಪ್ರೇಕ್ಷಾ ಪರೇಶ್ ಕರ್ಕೇರ ಟೇಬಲ್-ಟೆನ್ನಿಸ್ನ ದಕ್ಷಿಣ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಫೆ.24ರಿಂದ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯಲಿರುವ 13-15 ಸಬ್ ಜೂನಿಯರ್ ವಿಭಾಗದಲ್ಲಿ ದಕ್ಷಿಣ ಭಾರತ ತಂಡವನ್ನು ಇವರು ಪ್ರತಿನಿಧಿಸಲಿದ್ದಾರೆ.
ಮಂಗಳೂರಿನ ಚೈತನ್ಯ ಟೆಕ್ನೋ ಶಾಲೆಯಲ್ಲಿ 9ನೇ ತರಗತಿಯಲ್ಲಿ ಪ್ರೇಕ್ಷಾ ಪರೇಶ್ ಕರ್ಕೇರ ಕಲಿಯುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story