ಫೆ.25: ಕರಾವಳಿ ಕಾಲೇಜಿನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಹಬ್ಬ
ಮಂಗಳೂರು, ಫೆ.23: ನಗರದ ಕರಾವಳಿ ಕಾಲೇಜಿನಲ್ಲಿ ಕರಾವಳಿ ಕಾಲೇಜುಗಳ ಸಮೂಹದ ಅಂತರ್ ಕಾಲೇಜು ಸಾಂಸ್ಕೃತಿಕ ಹಬ್ಬ ಕೈಜನ್-2020 ಸ್ಪರ್ಧೆಯು ಫೆ.25ರಂದು ನಡೆಯಲಿದೆ.
ಕರಾವಳಿ ಕಾಲೇಜುಗಳ ಸಮೂಹದ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ರ ಜನ್ಮ ದಿನದ ಪ್ರಯುಕ್ತ ಪ್ರತಿ ವರ್ಷವು ಸಂಭ್ರಮದಿಂದ ಆಯೋಜಿಸಲಾಗು ತ್ತಿರುವ ಈ ಸ್ಪರ್ಧೆಯನ್ನು ಈ ಬಾರಿ ಅಂದು ಬೆಳಗ್ಗೆ 9:30ಕ್ಕೆ ಕಾಲೇಜಿನ ನಿರ್ದೇಶಕಿ ಲತಾ ಜಿ. ರಾವ್ ಉದ್ಘಾಟಿಸಲಿದ್ದಾರೆ.
ಫ್ಯಾಶನ್ ಶೋ, ವೆಸ್ಟರ್ನ್ ಗ್ರೂಪ್ ಡ್ಯಾನ್ಸ್, ಸೋಲೋ ಕ್ಲಾಸಿಕಲ್ ಡ್ಯಾನ್ಸ್, ಫೋಕ್ ಗ್ರೂಪ್ ಡ್ಯಾನ್ಸ್, ಕಾರ್ಟೂನಿಂಗ್, ಕೊಲ್ಲಾಜ್ ಮೇಕಿಂಗ್, ಕುಕ್ಕಿಂಗ್ ದೌಟ್ ಫೈರ್, ಫೇಸ್ ಪೈಂಟಿಂಗ್, ರಂಗೋಲಿ, ಫ್ಲವರ್ ಅರೇಂಜ್ಮೆಂಟ್, ನೈಲ್ ಆರ್ಟ್, ಬೆಸ್ಟ್ ಔಟ್ ಆಫ್ ವೇಸ್ಟ್, ವೆಜಿಟೇಬಲ್ ಆಂಡ್ ಫ್ರೂಟ್ ಕಾರ್ವಿಂಗ್, ಸೋಲೋ ಸಿಂಗ್ಗಿಂಗ್ ಇತ್ಯಾದಿ ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದೆ.
Next Story